ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!
ಕೆರೆನೋಟ-80 : ಕೆರೆ ಒತ್ತುವರಿ: ನುಂಗಣ್ಣರಿಗೆ ದೊಣ್ಣೆ ಏಟೋ? ತಪ್ಪಿಸಿಕೊಳ್ಳುವ ಜಾಣ್ಮೆಯೋ?

ರಾಜಧಾನಿ ಬೆಂಗಳೂರಿನಲ್ಲಿ ಒಂದಿಂಚು ಭೂಮಿಗೆ ಚಿನ್ನಕ್ಕಿಂತೂ ಹೆಚ್ಚು ಬೆಲೆ. ಅದಕ್ಕೇ ಒತ್ತುವರಿಯೆಂಬ ಪೆಡಂಭೂತಗಳು ಉದ್ಯಾನನಗರಿಯಲ್ಲಿ ಆವರಿಸಿಕೊಂಡು, ಜಲಮೂಲವಾದ ಕೆರೆಗಳನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತಿವೆ. ಇದರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. . ….......ಮುಂದೆ ಓದಿ

ಆ ಕೆರೆ ಸಂರಕ್ಷಕ ಈ ಆರಕ್ಷಕ

ಅದೊಂದು ಪಾಳು ಬಿದ್ದಿದ್ದ ಕೆರೆ. ಎಷ್ಟರಮಟ್ಟಿಗೆ ಅಂದ್ರೆ ಅಲ್ಲಿ ಕೆರೆ ಇತ್ತಾ ಅಂತಾ ಊಹಿಸುವುದೂ ಕೂಡ ಕಷ್ಟವಾಗಿತ್ತು. ಆದ್ರೀಗ ಶಿಸ್ತಿನ ಇಲಾಖೆ ಎಂದೇ ಹೆಸರಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕೈಗೊಂಡಿದ್ದ ನಿರ್ಧಾರದಿಂದ ಆ ಕೆರೆಗೆ ಮರುಜೀವ ಪಡೆದಿದೆ. ಅದೊಬ್ಬ ಪೊಲೀಸ್ ಅಧಿಕಾರಿಯ ಸತತ ಶ್ರಮದಿಂದ ಎನ್ನುವುದು ನಿಜಕ್ಕೂ ಹೆಮ್ಮೆ. ....................ಮುಂದೆ ಓದಿ

ನಮ್ಮೂರಿನ ಕೆರೆ ಮೊದಲು ಸುಪ್ರಸಿದ್ಧ ‘ಪಕ್ಷಿದಾಮ’ವಾಗಿತ್ತು ಊರ ಚರಂಡಿ ನೀರು ಸೇರಿದಮೇಲೆ ‘ಸೊಳ್ಳೆಧಾಮ’ವಾಗಿದೆ

ನೀರಿಗಾಗಿ ಮುಗಿಯದ ಯುದ್ದ

ಅಂದು ಮಧ್ಯಾಹ್ನದ ಸೂರ್ಯ ಕೆಂಪಗೆ ಜ್ವಲಿಸುತ್ತಿದ್ದ. ಚಳವಳಿಗೆ ಇನ್ನಷ್ಟು ಕಾವು ಏರಿತ್ತು. ನೀರಿಲ್ಲದಿದ್ದರೆ ಬದುಕು ಎಷ್ಟೊಂದು ದುರ್ಬರ!? ಮುಂದಾಲೋಚನೆಯ ಕ್ರಮವಾಗಿ ತಿಂಗಳ ಹಿಂದಿನಿಂದ ನಡೆಯುತ್ತಿದ್ದ ಚಳವಳಿ ಅದು. ಕೆಂಪಗೆ ಹೊಳೆಯುತ್ತಿದ್ದ ಸೂರ್ಯ ಅಂದಿನ ದುರ್ಬರ ಕೃತ್ಯಕ್ಕೆ ಸಾಕ್ಷಿಯಾಗಿದ್ದ.....................ಮುಂದೆ ಓದಿ

ಕೆರೆ ನೀರನ್ನು ಇಂಗಿಸಿ ! ಅಂತರ್ಜಲವನ್ನು ಹೆಚ್ಚಿಸುವ ವಿಧಾನ !!

ಅದು, ಎರಡು ಸಾವಿರದ ಆರನೇ ಇಸವಿ . ಪಾವಗಡದ ರೈತ ಸಂಘದವರು, ನೂರಾರು ಅಡಿ ಆಳದಿಂದ ಬೋರ್ ವೆಲ್ ಗಳಲ್ಲಿ ನೀರು ಎತ್ತಿ, ಕುಡಿಯಲು ಬಳಸುತ್ತಿರುವ ನೀರಿನಲ್ಲಿ ಹೆಚ್ಚು ಪ್ಲೊರೈಡ್ ಇದೆ. ಈ ನೀರು ಕುಡಿಯುತ್ತಿರುವುದರಿಂದ ಜನರಿಗೆ ನಾನಾ ರೀತಿ ಕಾಯಿಲೆಗಳು ಬರುತ್ತಿವೆ . .,...........…ಮುಂದೆ ಓದಿ

ತ್ಯಾಜ್ಯದ ನೀರಿನಿಂದ ತನ್ನ ಅಂದಗೆಡಿಸಿಕೊಂಡ ಬಿಳಾಲಖಂಡ

ಬಿಳಾಲಖಂಡ ಭಟ್ಕಳ ಪಟ್ಟಣದಿಂದ ೬ಕಿ.ಮೀ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ. ಸುತ್ತಲೂ ಹಬ್ಬಿಕೊಂಡಿರುವ ವನ ರಾಶಿಯ ಮಧ್ಯದಲ್ಲಿ ಹಸುರಿನಿಂದ ಕಂಗೊಳಿಸುವ ಅಡಿಕೆ, ತೆಂಗು ತೋಟಗಳು, ಭತ್ತದ ಗದ್ದೆಗಳ ನಡುವೆ ಈ ಹಳ್ಳಿ ನೋಡುಗರ ಕಣ್ಣಿಗೆ ಹಾಯೆನಿಸುತ್ತದೆ. .,...........…ಮುಂದೆ ಓದಿ