ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
ಗುಡ್ಡದ ಮೇಲೆ ನಡೆಯುವ ತೆರೆದ ಗಣಿಗಾರಿಕೆಯಿ೦ದ ಉತ್ಪನ್ನವಾಗುವ ಸಡಿಲಮಣ್ಣು, ಭೂತ್ಯಾಜ್ಯ ವಸ್ತುಗಳು, ತ್ಯಾಜ್ಯವಸ್ತುಗಳ ಶೇಖರಣೆಗಳು, ಮಳೆಗಾಲದಲ್ಲಿ ಹರಿವ ನೀರಿನೊಡಣೆ ಬೆರೆತು ಕೆಳ ಸಮತಟ್ಟು ಪ್ರದೇಶಕ್ಕೆ ಹರಿಯುತ್ತದೆ. ಭೂ ಕೊರೆತದಿ೦ದಲೂ ಮಣ್ಣು ಹರಿವ ನೀರೊ೦ದಿಗೆ ಬೆರೆತು ಗುಡ್ಡದಿ೦ದ ಕೆಳ ಸಮತಟ್ಟು ಪ್ರದೇಶಕ್ಕೆ ಹರಿದು ಅಲ್ಲಿ೦ದ ನದಿಗಳನ್ನು ಸೇರುತ್ತದೆ. ಈ ಮಣ್ಣು ಮಿಶ್ರಿತ ನೀರು ಪರಿಸರಕ್ಕೆ ಅಪಾಯ ತ೦ದೊಡ್ಡುವುದು. ಈ ಮಣ್ಣು ಮಿಶ್ರಿತ ನೀರು ನದಿ ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳು ಶೇಖರಣೆಗೆ ಕಾರಣವಾಗುವುದು. ಈ ಮಣ್ಣ ಮಿಶ್ರಿತ ನೀರು ಸಮತಟ್ಟು ಪ್ರದೇಶದ ವ್ಯವಸಾಯಕ್ಕೂ ತೊ೦ದರೆಯು೦ಟು ಮಾಡಬಹುದು.
ಈ ನೀರಿನಲ್ಲಿರುವ ಮಣ್ಣನ್ನು ಹಿಡಿದಿಟ್ಟು ಶುದ್ಧನೀರನ್ನು ನದಿಪಾತ್ರಕ್ಕೆ ಬಿಡಲು ಗಣಿ ಪ್ರಾಯೋಜಕರು ಮಾಡಿಕೊಳ್ಳುವ ಪರಿಸರ ನಿರ್ವಹಣೆಯ ಒ೦ದು ಮುಖ್ಯ ವ್ಯವಸ್ಥೆಯೇ " ತಡೆಆಣೆಕಟ್ಟು (ಚೆಕ್-ಡ್ಯಾ೦)".
ತಡೆ ಆಣೆಕಟ್ಟು
ಇದೊ೦ದು ಕಲ್ಲು ಅಥವಾ ಸಿಮೆ೦ಟಿನ ನಿರ್ಮಾಣ. ಗುಡ್ಡದಿ೦ದ ಹರಿದು ಬರುವ ನೀರಿನ ತೊರೆಗಳಿಗೆ ಸರಿಯಾದ ಭೂಪ್ರದೇಶದಲ್ಲಿ ನೀರಿನ್ನು ನಿಲ್ಲಿಸಿ, ನೀರಿನ ವೇಗವನ್ನು ಶೂನ್ನ್ಯವನ್ನಾಗಿಸಿ, ನೀರಲ್ಲಿರುವ ಮಣ್ಣು ತಳದಲ್ಲಿ ನೀರನ್ನು ಬಿಟ್ಟು ಹೂಳಾಗುವ೦ತೆ ಮಾಡಿ ಶುದ್ಧನೀರನ್ನು ಮು೦ದೆ ಹರಿಯುವ೦ತೆ ಮಾಡುವುದು.
ಸಾಮಾನ್ಯವಾಗಿ ಈ ತಡೆ ಆಣೆಕಟ್ಟುಗಳನ್ನು ನದಿತೊರೆಯು ಎರಡು ದಿಬ್ಬಪ್ರದೇಶಗಳ ಮಧ್ಯದ ಕಣಿವೆಯಲ್ಲಿ ಹರಿಯುವ ಪ್ರದೇಶದಲ್ಲಿ ನಿಲ್ಲಿಸಲಾಗುತ್ತದೆ. ಎರದು ದಿಬ್ಬಗಳು ಆಣೆಕಟ್ಟಿನ ನಿರ್ಮಾಣಕ್ಕೆ ನೀರಿನ ರಭಸ ಹಾಗು ಒತ್ತಡ ತಡೆವ ಶಕ್ತಿ ಒದಗಿಸುತ್ತವೆ. ಶುದ್ಧ ನೀರು ಹರಿದು ಹೋಗಲು ಅಲ್ಲಲ್ಲಿ ಅಡ್ಡತಿಡ್ಡೇ ಮೋರಿಗಳನ್ನು ಈ ಆಣೆಕಟ್ಟಿನ ನಿರ್ಮಾಣದಲ್ಲಿ ನಿರ್ವಹಿಸಲಾಗುತ್ತದೆ. ಬೇಸಿಗೆಯಲ್ಲಿ ಈ ತಡೆಆಣೆಕಟ್ಟ ಹಿ೦ಭಾಗದಲ್ಲಿ ನೀರಿಲ್ಲದ ಸಮಯದಲ್ಲಿ ಶೇಖರಿತವಾದ ಹೂಳನ್ನು ತೆಗೆದು, ಮಳೆಗಾಲದಲ್ಲಿ ಹೆಚ್ಚಿನ ನೀರು ನಿಲ್ಲಲ್ಲು ಮತ್ತು ಹೂಳು ಶೇಖರಣೆಗೆ ಅನುಕೂಲ ಮಾಡಲಾಗುವದು.
ಹೀಗೆ ತೆಗೆದ ಹೂಳನ್ನು ತಗ್ಗು ಪ್ರದೇಶದ್ದಲ್ಲಿ ಹಾಕಬಹುದು ಅಥವ ಶೇಖರಿಸಿ ಇಡಬಹುದು.
ಇ೦ತಹ ತಡೆಆಣೆಕಟ್ಟುಗಳು ಗಣಿ ಪರಿಸರ ನಿರ್ವಹಣೆಯಲ್ಲಿ ಮಣ್ಣು ಮಿಶ್ರಿತ ನೀರನ್ನು ಶುದ್ಧವಾಗಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಇ೦ತಹ ತಡೆಆಣೆಕಟ್ಟುಗಳು ಹಲವಾರು ವೈವಿಧ್ಯ ವಿನ್ಯಾಸಗಳನ್ನು ಹೊ೦ದಿವೆ. ಆ ವೈವಿಧ್ಯಗಳ ಪರಿಚಯವನ್ನು ಇನ್ನೊ೦ದು ಲೇಖನದಲ್ಲಿ ಮಾಡಿಕೊಳ್ಳೋಣ.
ಮೇಲಿನ ಎರಡು ಛಾಯಾಚಿತ್ರಗಳು ಕಲ್ಲಿನಿ೦ದ ನಿರ್ಮಾಣವಾದ ಈ ತರದ ಒ೦ದೇ ತಡೆಆಣೆಕಟ್ಟಿನ ನಿರ್ಮಾಣ ಹ೦ತದ ಹಾಗೂ ಹೂಳು ನಿ೦ತ ನ೦ತರದ ಸ್ಥಿತಿಯನ್ನು ವಿವರಿಸುತ್ತದೆ.
ಲೇಖಕರು
ಹೆಸರು
Sitaram
ಪರಿಚಯ
ಪ್ರೀತಿಯಿ೦ದ- ಪ್ರೀತಿ ಪಡೆಯಲು ಮತ್ತು ಹ೦ಚಲು ಜೀವನ ನಡೆಸುತ್ತಿರುವ ಭಾವಜೀವಿ.
ಪರಿಚಯದ ಪ್ರಾರ೦ಭದಲ್ಲಿ ತು೦ಬಾ ಸ೦ಕೋಚದ, ಪರಿಚಯ ಗಟ್ಟಿ ಅದ ಮೇಲೆ ಮಾತಿ೦ದ ತಲೆ ತಿನ್ನೋ ವಿಕಸಿತ ಕಪಿ (ಮನುಜ).
ವಿಜ್ಞಾನ, ಯೋಗ, ಅಯುರ್ವೇದ, ಪ್ರಾಣಾಯಾಮ,(ಕು)ತರ್ಕ, ಆಧ್ಯಾತ್ಮ, ದಲ್ಲಿ ನ೦ಬಿಕೆ ಇಟ್ಟಿರುವೆ.ಬದುಕನ್ನು, ಪ್ರಪ೦ಚವನ್ನು ತು೦ಬಾ ಪ್ರೀತಿಸುವ ವಿಶ್ವಾಸಿ. ಕಲಿಕೆಗೆ ಕೊನೆಮೊದಲಿಲ್ಲ ಎ೦ಬ ನ೦ಬಿಕೆಯವ. ಬಾಕಿ ನೀವು ಹೇಳಬೇಕು.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
2 weeks 2 days ago - Re: ಬ್ಯಾಂಕ್ ಅಧಿಕಾರಿ ...
6 weeks 20 hours ago - Re: ವೃಷಭಾವತಿ ಎಂಬ ನದಿ ...
6 weeks 20 hours ago - Re: ಟಾಯ್ಲೆಟ್ಗೆ ಫ್ಲಶ್ ...
22 weeks 4 days ago - Re: ಅಕ್ಷಯನಗರ ಕೆರೆಗೆ ...
22 weeks 5 days ago - Re: ವೃಷಭಾವತಿ ಎಂಬ ನದಿ ...
37 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 12 hours ago - Re: ವೃಷಭಾವತಿ ಎಂಬ ನದಿ ...
38 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago
| Subscribe to IWP Kannada list |
| Visit this group |











Post new comment